Western Ghats information in Kannada
Check out western ghats detail information in Kannada ” ಪಶ್ಚಿಮ ಘಟ್ಟದ ಗಿರಿ ಪಂಕ್ತಿಗಳು ಹಬ್ಬಿರುವ ಪ್ರದೇಶಗಳು, ನದಿಗಳು, ಜೀವ ಸಂಕುಲಗಳು, ಶ್ರೇಣಿಗಳು, ತಾಣಗಳು, ಪಕ್ಷಿ ಸಂಕುಲಗಳು, ಅಪಾಯದಂಚಿನಲ್ಲಿರುವ ಜೀವಿಗಳು, ಇಲ್ಲಿನ ಮೂಲ ನಿವಾಸಿಗಳು “
ಭಾರತದ ಪಶ್ಚಿಮ ಕರಾವಳಿಯಲ್ಲಿ ಸಮುದ್ರ ಮಟ್ಟದಿಂದ ಹಬ್ಬಿರುವ ಗಿರಿ ಕಂದರಗಳ ಶ್ರೇಣಿಯನ್ನು ಪಶ್ಚಿಮ ಘಟ್ಟಗಳೆಂದು ಕರೆಯುತ್ತಾರೆ.
Contents
ಪಶ್ಚಿಮ ಘಟ್ಟದ ಗಿರಿ ಪಂಕ್ತಿಗಳು ಹಬ್ಬಿರುವ ಪ್ರದೇಶಗಳು :
- ಕೇರಳ
- ಕರ್ನಾಟಕ
- ಗೋವಾ
- ಮಹಾರಾಷ್ಟ್ರ
- ಗುಜರಾತ್
ಈ ಭೂ ಪ್ರದೇಶ ಒಟ್ಟು 1600 ಕಿ. ಮೀ ನಷ್ಟು ಉದ್ದವಿದೆ. ಅರಬ್ಬೀ ಸಮುದ್ರಕ್ಕೆ ಸಮಾನಾಂತರವಾಗಿ ಸಾಗುವ ಪಶ್ಚಿಮ ಘಟ್ಟಗಳನ್ನು ಮತ್ತು ಸಮುದ್ರವನ್ನು ಕಿರಿದಾದ ತೀರ ಪ್ರದೇಶವೊಂದು ಪ್ರತ್ಯೇಕಿಸಿದೆ.
ಪಶ್ಚಿಮ ಘಟ್ಟಗಳ ಪ್ರದೇಶವು ಜೀವ ಪರಿಸ್ಥಿತಿಗೆ ಸಂಭಂದಿಸಿದಂತೆ ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶವೆಂದು ಯುನೆಸ್ಕೊ ಸಂಸ್ಥೆ ಘೋಷಿಸಿದೆ.
ಪಶ್ಚಿಮ ಘಟ್ಟಗಳು ನಿಜವಾದ ಅರ್ಥದಲ್ಲಿ ಪರ್ವತಗಳಲ್ಲ. ಅವು ದಕ್ಷಿಣ ಪ್ರಸ್ಥಭೂಮಿಯ ಸುಮಾರು 15ಕೋಟಿ ವರ್ಷಗಳ ಹಿಂದೆ ಭೂ ಒತ್ತಡದಿಂದ ಮಡಿಕೆಯಾಗಿ ಮೇಲೆದ್ದಿದ ಪರಿಣಾಮವಾಗಿ ಉಂಟಾದ ಶ್ರೇಣಿಗಳ. ಕರ್ನಾಟಕದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ ವಿವಿಧ ಬಗೆಯ ಕಾಡುಗಳಿದ್ದರು ಸಹ ಹೆಚ್ಚಿನ ಭಾಗ ತೇವಾಂಶಭರಿತ ಕಾಡುಗಳಿಂದ ಕೂಡಿದೆ. ಗುಡ್ಡದ ತಲೆಯಲ್ಲಿ ಅಪೂರ್ವವೆನಿಸಿದ ಹುಲ್ಲುಗಾವಲು ಮತ್ತು ಶೋಲಾ ಕಾಡುಗಳಿವೆ. ಈ ಪ್ರದೇಶದಲ್ಲಿ ಹುಟ್ಟುವ ಅಸಂಖ್ಯಾತ ನದಿಗಳು ವರ್ಷಪೂರ್ತಿ ಹರಿದು ಬಹುತೇಕ ನದಿಗಳ ಜೀವಧಾರೆಗಳಾಗಿವೆ.
ಕರ್ನಾಟಕದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ನದಿಗಳು :
- ಕಾವೇರಿ
- ಕೃಷ್ಣ
- ಘಟಪ್ರಭಾ
- ಮಲಪ್ರಭಾ
- ತುಂಗೆ
- ಭದ್ರ
- ಹೇಮಾವತಿ
- ಭೀಮಾ
- ಕಬಿನಿ
ಕರ್ನಾಟಕದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ನದಿಗಳು:
- ನೇತ್ರಾವತಿ
- ಕಾಳಿ
- ಅಘನಾಶಿನಿ
- ಸೀತಾ
ಈ ನದಿಗಳು ಪಶ್ಚಿಮ ಘಟ್ಟಗಳಲ್ಲಿ ಸೃಷ್ಟಿಸುವ ಜಲಪಾತಗಳು ಮಾನವನ ಸೌಂದರ್ಯವ ತಾಣಗಳಾಗಿವೆ.
ಕರ್ನಾಟಕದ ವಿಶೇಷ ತಾಣಗಳೆಂದು ಈ ಕೆಳಕಂಡ ತಾಣಗಳನ್ನು ಗುರುತಿಸಬಹುದು.
- ಜೋಗ
- ಊಂಚಳ್ಳಿ
- ಮಾಗೋಡು
- ಕುಂಚಿಕಲ್
ಪಶ್ಚಿಮ ಘಟ್ಟ ಪ್ರದೇಶ ಜೈವಿಕ ವೈವಿಧ್ಯ ಅಪೂರ್ವ.
- 4.78 ಕ್ಕೂ ಮಿಗಿಲಾದ ಸಸ್ಯಸಂಕುಲ
- 1.39 ಬಗೆಯ ಸ್ತನಿಗಳು
- 218 ಜಾತಿಯ ಮೀನು
- 156 ವಿಧದ ಸರಿಸೃಪಗಳು
- 330 ಚಿಟ್ಟೆಗಳು
- 121 ಉಭಯವಾಸಿಗಳು
- 508 ಹಕ್ಕಿಗಳು
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುವ ಒಟ್ಟು ಜೀವ ಸಂಕುಲಗಳು
- 1500 ಹೂ ಬಿಡುವ ಸಸ್ಯ
- 14 ಸ್ತನಿಗಳು
- 19 ಹಕ್ಕಿಗಳು
- 97 ಸರೀಸೃಪಗಳು
- 94 ಉಭಯವಾಸಿಗಳು
- 116 ಮೀನು
- 37 ಚಿಟ್ಟೆ
ಪಶ್ಚಿಮ ಘಟ್ಟಗಳು ಉತ್ತರದಲ್ಲಿ ಮಧ್ಯಭಾರತದ ಸಾತ್ಪುರ ಶೃಂಗದಿಂದ ಹಲವಾರು ಶ್ರೇಣಿಗಳವರೆಗೆ ಹಬ್ಬಿದೆ. ಅವು ಯಾವುದೆಂದರೆ :
- ಮಹಾರಾಷ್ಟ್ರ
- ಗೋವಾ
- ಕರ್ನಾಟಕ
- ಕೇರಳ
- ತಮಿಳುನಾಡು
ಉತ್ತರದಿಂದ ಆರಂಭಗೊಂಡಂತೆ ಗೋವಾದಲ್ಲಿ ದೊಡ್ಡ ಬಿರುಕು ಅಥವಾ ಕಂದರ ಇದ್ದು ಅದನ್ನು ಗೋವಾ ಗ್ಯಾಪ್ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಅಖಂಡವಾಗಿ ಹರಡಿರುವ ಘಟ್ಟಗಳು ನೀಲಗಿರಿ ಮತ್ತು ಆನೆಮಲೈ ಪರ್ವತಗಳ ನಡುವೆ ಕೇರಳದ ಗಡಿಯಲ್ಲಿ ಪಾಲ್ವಾಟ್ ಗ್ಯಾಪ್ ಅಲ್ಲಿ ತುಂಡರಿಸಿದೆ. ಕರ್ನಾಟಕದ ಬಿಳಿರಂಗನ ಬೆಟ್ಟವು ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳ ಸಂಗಮ ಪ್ರದೇಶದಲ್ಲಿ ಹರಡಿದೆ.
ಉತ್ತರದಿಂದ ಆರಂಭವಾಗುವ ದೊಡ್ಡ ಪರ್ವತ ಶ್ರೇಣೆಯೆಂದರೆ ಸಹ್ಯಾದ್ರಿ ಶ್ರೇಣಿ. ಸಕಲ ಜೀವರಾಶಿಗೂ ಉಪಯುಕ್ತವಾಗಿರುವ ಕಾರಣ ಅದಕ್ಕೆ ಆ ಹೆಸರು. ಸಹ್ಯಾದ್ರಿ ಶ್ರೇಣಿಯು ಮಹಾರಾಷ್ಟ್ರದಿಂದ ಕೇರಳದವರೆಗೆ ಹರಡಿರುವ ಶ್ರೇಣಿಯಾಗಿದೆ.ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಶ್ರೇಣಿಯನ್ನು ಸಹ್ಯಾದ್ರಿ ಎಂದು ಕರೆಯುತ್ತಾರೆ. ಆದರೆ ಕೇರಳದಲ್ಲಿ ಸಹ್ಯಾದ್ರಿ ಪರ್ವತಮ್ ಎಂದು ಕರೆಯುತ್ತಾರೆ. ಸಹ್ಯಾದ್ರಿ ಪರ್ವತ ಶ್ರೇಣಿಯು ಅನೇಕ ಗಿರಿಧಾಮಗಳನ್ನು ಮತ್ತು ಮನೋಹರ ತಾಣಗಳನ್ನು ನೀಡಿದೆ.
ಕರ್ನಾಟಕದಲ್ಲಿ ಕಂಡುಬರುವ ತಾಣಗಳು :
- ಕುದುರೆಮುಖ
- ಕೊಡಗು
- ಬಾಬಾ ಬುಡನ್ ಗಿರಿ
- ಮುಳ್ಳಯ್ಯನಗಿರಿ
- ಬ್ರಹ್ಮಗಿರಿ
- ಆಗುಂಬೆ
ಮಹಾರಾಷ್ಟ್ರದಲ್ಲಿ ಕಂಡುಬರುವ ತಾಣಗಳು :
- ಲೋನ್ವಾಲಾ ಖಂಡಾಲಾ
- ಪಂಚಾಗ್ನಿ
- ಅಂಚೋಳಿ ಘಟ್ಟ
ಅತ್ಯಂತ ಎತ್ತರವಾದ ಪಶ್ಚಿಮ ಘಟ್ಟದ ಶ್ರೇಣಿ ಎಂದರೆ ತಮಿಳುನಾಡಿನ ಆನೈಮುಡಿ ಪರ್ವತ.ಇದು 2700ಮೀಟರ್ ಎತ್ತರವಿದೆ.
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಕರ್ನಾಟಕದ ಉನ್ನತ ಶಿಖರ.
ಪಶ್ಚಿಮ ಘಟ್ಟಗಳಲ್ಲಿ 20 ಅತ್ಯುನ್ನತ ಶಿಖರಗಳಲ್ಲಿ ಕರ್ನಾಟಕದ ಈ ಕೆಳಗಿನವುಗಳನ್ನು ಕಾಣಬಹುದಾಗಿದೆ.
- ಮುಳ್ಳಯ್ಯನಗಿರಿ
- ಬಾಬಾ ಬುಡನ್ ಗಿರಿ
- ಕುದುರೆಮುಖ
- ಬಿಳಿಗಿರಿರಂಗನ ಬೆಟ್ಟ
- ಕುಮಾರಪರ್ವತ
- ಪುಷ್ಪಗಿರಿ
- ಬ್ರಹ್ಮಗಿರಿ
- ಕೊಡಗು
- ಹಿಮವದ್ ಗೋಪಾಲಸ್ವಾಮಿ ಬೆಟ್ಟ
- ಕೊಡಚಾದ್ರಿ
ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಪಕ್ಷಿ ಸಂಕುಲಗಳು
- ನೀಲಗಿರಿ ಲಾಫಿಂಗ್ ಥ್ರಶ್
- ನೀಲಗಿರಿ ವುಡ್ ಪಿಜನ್
- ಬಿಳಿ ಎದೆಯ ಶಾರ್ಟ್ ವಿಂಗ್
- ಬ್ರಾಡ್ ಟೈಲ್ಡ್ ಗ್ರಾಸ್ ವಾಬ್ಲರ್
- ಬೂದು ತಲೆಯ ಫಿಶ್ ಈಗಲ್
- ಮಲಬಾರ್ ಪೈಡ್ ಮಂಗಟ್ಟೆ ಹಕ್ಕಿ
- ನೀಲಗಿರಿ ಪಿಪೆಟ್
- ಬೂದು ಎದೆಯ ಲಾಷಿಂಗ್ ಥ್ರಶ್
- ಕಪ್ಪು ಕಿತ್ತಳೆ ಬಣ್ಣದ ನೊಣ ಹಿಡುಕ
- ನೀಲಗಿರಿ ನೊಣ ಹಿಡುಕ
ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಕಾಡುಗಳು ಸೇರಿದಂತೆ ಪಶ್ಚಿಮ ಘಟ್ಟಗಳನ್ನು ವಿಶ್ವದ 25 ಪ್ರಮುಖ ಜೀವಪರಿಸರ ವಲಯಗಳಲ್ಲಿ ಒಂದೆಂದು ಗುರುತಿಸಲಾಗಿದೆ. ಪಶ್ಚಿಮ ಘಟ್ಟದ ದಕ್ಷಿಣ ಭಾಗದ ಹೆಚ್ಚಿನ ಭಾಗ ಉಷ್ಣವಲಯದ ತೇವಾಂಶಭರಿತ ನಿತ್ಯ ಹರಿದ್ವರ್ಣದ ಕಾಡುಗಳನ್ನೊಳಗೊಂಡಿದೆ.
ಇಲ್ಲಿ ಜೈವಿಕ ವೈವಿಧ್ಯಗಳು ಅಗಾಧವಿರುವ ಅಪಾಯದಂಚಿನಲ್ಲಿರುವ ಜೀವಿಗಳು
- ನೀಲಗಿರಿ ಥಾರ್
- ನೀಲಗಿರಿ ಲಂಗೂರ್
- ಬೂದು ಬಣ್ಣದ ಪಿವೆಟ್ ಗಳು
- ಸಿಂಹಬಾಲದ ಕೋತಿ
ಪಶ್ಚಿಮ ಘಟ್ಟಗಳಲ್ಲಿ ವೈವಿಧ್ಯಮಯ ಸಂಸ್ಕೃತಿ, ವಿವಿಧ ಭಾಷೆ, ಧರ್ಮಗಳು, 20ಕೋಟಿ ಜನ ಇಲ್ಲಿ ನೆಲೆಸಿದ್ದಾರೆ. ಇಲ್ಲಿನ ಮೂಲ ನಿವಾಸಿಗಳು
- ತೋಡಾ
- ಕೋಟಾ
- ಇರುಳಾ
- ಕುರುಬಾ
- ಚೋಳನಾಯ್ಕ
- ಸೋಲಿಗರ ಪಂಗಡಗಳು
ಇಲ್ಲಿ ಆ ಕಾಲದಲ್ಲಿ ಕೃಷಿ ಮತ್ತು ಇತರೆ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶವಿರಲಿಲ್ಲ. ಆದರೆ ಬ್ರಿಟಿಷರ ಆಗಮನದ ನಂತರ ಪಶ್ಚಿಮ ಘಟ್ಟಗಳ ಬಹುತೇಕ ಕಾಡುಗಳು ಮರ ಮಟ್ಟುಗಳಿಗೆ ಬಲಿಯಾದವು. ಕ್ರಮೇಣ ಕೃಷಿ ಭೂಮಿಯ ವಿಸ್ತರಣೆಗೆ ಕಾಡುಗಳನ್ನು ತೆರವುಗೊಳಿಸಲಾಯಿತು. ಅರಣ್ಯಗಳು ಕಾಫಿ ಚಹಾ ತೋಟಗಳಾಗಿ ಪರಿವರ್ತನೆಯಾಯಿತು. ಮರಗಳಿದ್ದ ಕಾಡು ನಾಶವಾಗಿ ನಡು ತೋಟಗಳು ತಲೆಯೆತ್ತಿದವು. ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ಅರಣ್ಯಗಳು ಮುಳುಗಡೆಯಾದವು.
1860 ರಿಂದ 1950 ರವರೆಗೆ ನಿರಂತರವಾಗಿ ಕಾಡುಗಳ ಮೇಲೆ ದಾಳಿಯಾಯಿತು. ಮೊದಲಿಗೆ 182500 ಚದರ ಕಿಮೀ ಗಳಷ್ಟಿದ್ದ ಕಾಡಿನ ಪ್ರದೇಶ ಈಗ 12450 ಚ. ಕಿ. ಮೀ ಗೆ ಇಳಿಮುಖವಾಗಿದೆ. 1920 ರಿಂದ 1990 ರ ವೇಳೆಗೆ ಶೇ. 45ಕ್ಕೂ ಹೆಚ್ಚಿನ ಕಾಡು ಕಣ್ಮರೆಯಾಗಿದೆ ಎಂಬ ವರದಿಸಿಕ್ಕಿದೆ. ಉಳಿದಿರುವ ಕಾಡಿನ ಪ್ರದೇಶ ಜನಸಂಖ್ಯಾ ಹೆಚ್ಚಳದಿಂದ ತತ್ತರಿಸಿದೆ.
Question and answer on western ghats :
1. ಕಾವೇರಿ
2. ಕೃಷ್ಣ
3. ಘಟಪ್ರಭಾ
4. ಮಲಪ್ರಭಾ
5. ತುಂಗೆ
6. ಭದ್ರ
7. ಹೇಮಾವತಿ
8. ಭೀಮಾ
9. ಕಬಿನಿ
10. ನೇತ್ರಾವತಿ
11. ಕಾಳಿ
12. ಅಘನಾಶಿನಿ
13. ಸೀತಾ
1. ಮುಳ್ಳಯ್ಯನಗಿರಿ
2. ಬಾಬಾ ಬುಡನ್ ಗಿರಿ
3. ಕುದುರೆಮುಖ
4. ಬಿಳಿಗಿರಿರಂಗನ ಬೆಟ್ಟ
5. ಕುಮಾರಪರ್ವತ
6. ಪುಷ್ಪಗಿರಿ
7. ಬ್ರಹ್ಮಗಿರಿ
8. ಕೊಡಗು
9. ಹಿಮವದ್ ಗೋಪಾಲಸ್ವಾಮಿ ಬೆಟ್ಟ
10. ಕೊಡಚಾದ್ರಿ
ಮುಳ್ಳಯ್ಯನಗಿರಿ
1. ನೀಲಗಿರಿ ಥಾರ್
2. ನೀಲಗಿರಿ ಲಂಗೂರ್
3. ಬೂದು ಬಣ್ಣದ ಪಿವೆಟ್ ಗಳು
4. ಸಿಂಹಬಾಲದ ಕೋತಿ
One Comment